Thursday, July 2, 2009

ಸಣ್ಣ ಬದಲಾವಣೆ

ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಬ್ಲಾಗ್ ಆರಂಭಕ್ಕೆ ನಿಮ್ಮೆಲ್ಲರ ಹೃದಯಸ್ಪರ್ಶಿ ಸ್ವಾಗತ ನೀಡಿದ್ದು ನಮ್ಮ ಉತ್ಸಾಹ ಹೆಚ್ಚಿಸಿದೆ. ಆದರೆ ಈಗಿನ ಯುಆರ್ಎಲ್ ತೀರಾ ಉದ್ದವಾಗಿದೆ, ನೆನಪಿರಿಸಿಕೊಳ್ಳಲು ಕಷ್ಟ ಎಂಬ ಹಿನ್ನೆಲೆಯಲ್ಲಿ ಪ್ರತ್ಯೇಕ ತಾಣವೊಂದನ್ನು ರೂಪಿಸಿದ್ದೇವೆ. ಹೊಸ ಯುಆರ್ಎಲ್ ಒಮ್ಮೆ ಓದಿದರೆ ನೆನಪಿಟ್ಟುಕೊಳ್ಳಬಹುದು. ಇಷ್ಟೇ...www.mangalorepress.blogspot.com ಇದನ್ನು ಕ್ಲಿಕ್ಕಿಸಿದರೆ ನೀವು ಹೊಸ ತಾಣಕ್ಕೆ ಕಾಲಿಡುತ್ತೀರಿ. ಇನ್ನು ಮುಂದೆ ಮಂಗಳೂರು ಪ್ರೆಸ್.ಬ್ಲಾಗ್ ಸ್ಪಾಟ್.ಕಾಂ ಮುಂದುವರಿಯಲಿದೆ. ಸದಾ ಪ್ರೋತ್ಸಾಹವಿರಲಿ

Wednesday, July 1, 2009

ಪತ್ರಿಕಾ ಛಾಯಾಗ್ರಾಹಕರ ಚಿತ್ರ ಪ್ರದರ್ಶನ

ಯಾವಾಗಲೂ ಎಲ್ಲೆಡೆ ನಡೆಯುವ ಕಾರ್ಯಕ್ರಮಗಳಿಗೆ, ಅಪಘಾತಗಳಿಗೆ ಸಾಕ್ಷಿಯಾಗುವ ಪತ್ರಿಕಾ ಛಾಯಾಚಿತ್ರಗ್ರಾಹಕರಿಗೆ ತಮ್ಮ ಅಮೂಲ್ಯ ಚಿತ್ರಗಳನ್ನು ಪ್ರದರ್ಶಿಸುವ ಅವಕಾಶ ಸೃಷ್ಟಿಯಾದ್ದು ಬುಧವಾರ, ಅದೂ ಪತ್ರಿಕಾದಿನಾಚರಣೆ ಸಂದರ್ಭದಲ್ಲಿ.
ಮಂಗಳೂರಿನ 10 ವೃತ್ತಿಪರ ಪತ್ರಿಕಾ ಛಾಯಾಗ್ರಾಹಕರು ಸೆರೆಹಿಡಿದ 91 ಚಿತ್ರಗಳು ಪ್ರದರ್ಶನಗೊಂಡವು.
ನಾರಾಯಣ ಬಾಳಿಲ, ಚಂದ್ರಹಾಸ ಕೋಟೆಕಾರ್, ಜಿ.ಕೆ.ಹೆಗಡೆ, ರಾಮಕೃಷ್ಣ ಭಟ್, ಸುಧಾಕರ ಎರ್ಮಾಳ್, ಅಹ್ಮದ್ ಅನ್ವರ್, ಸತೀಶ್ ಇರಾ, ರವಿ ಪೊಸವಣಿಕೆ, ದಯಾನಂದ ಕುಕ್ಕಾಜೆ ಮತ್ತು ಈಶ್ವರರಾಜ್ ಅವರ ಆಯ್ದ ಛಾಯಾಚಿತ್ರಗಳು ಪ್ರದರ್ಶನದಲ್ಲಿವೆ.
ಸುದ್ದಿಚಿತ್ರಗಳು, ಕಲಾಶೈಲಿಯ ಚಿತ್ರಗಳೆರಡೂ ಸಮಾನ ಸಂಖ್ಯೆಯಲ್ಲಿದೆ.
ಹಿರಿಯಛಾಯಾಗ್ರಾಹಕ ಬಾಲ್ಕೊ ಸ್ಟುಡಿಯೋ ಮಾಲೀಕ ಶಾಂತಾರಾಮ ರಾವ್ ಉದ್ಘಾಟಿಸಿದರು. ಉದಯವಾಣಿ ಬ್ಯೂರೋ ಮುಖ್ಯಸ್ಥ ಮನೋಹರಪ್ರಸಾದ್ ಅವರು ದ.ಕ ಜಿಲ್ಲಾ ಪತ್ರಕರ್ತರ ಸಂಘದ ಬ್ಲಾಗಿಗೆ ಚಾಲನೆ ನೀಡಿದರು. ಹಿರಿಯ ಛಾಯಾಗ್ರಾಹಕ ಯಜ್ಞ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಆನಂದ ಶೆಟ್ಟಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಹರ್ಷ, ಪ್ರಧಾನ ಕಾರ್ಯದರ್ಶಿ ಗುರುವಪ್ಪ ಬಾಳೆಪುಣಿ ಹಾಜರಿದ್ದರು.

Tuesday, June 30, 2009

ನಮ್ಮ ಸಂಘದ ಬ್ಲಾಗ್ ಗೆ ಚಾಲನೆ

ಸಂವಹನ ಉದ್ದೇಶಕ್ಕಾಗಿಯೇ ಸೃಷ್ಟಿಯಾಗಿರುವ ನವ ಮಾಧ್ಯಮ (ಇಂಟರ್ ನೆಟ್ ಇತ್ಯಾದಿ)ಗಳ ಸದುಪಯೋಗಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘವೂ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಬ್ಲಾಗ್ ಆರಂಭಿಸಿದ್ದೇವೆ.


ಜುಲೈ 1 ರಂದು ಪತ್ರಿಕಾ ದಿನಾಚರಣೆ. ಇದರ ಪ್ರಯುಕ್ತ ಬುಧವಾರ ಸಂಘದ ಆವರಣದಲ್ಲಿ ನಡೆಯುವ ಛಾಯಾಗ್ರಾಹಕರ ಛಾಯಾಚಿತ್ರಗಳ ಪ್ರದರ್ಶನ ಎರಡು ದಿನಗಳ ಕಾಲ ಕಳೆಗಟ್ಟಲಿದೆ. ಪ್ರದರ್ಶನವನ್ನು ಹಿರಿಯ ಛಾಯಾಗ್ರಾಹಕ ಯಜ್ಞ ಅವರು ಉದ್ಘಾಟಿಸುವರು.

ಇದೇ ಸಂದರ್ಭದಲ್ಲಿ ಹಲವು ವರ್ಷಗಳ ಕಾಲದಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ದುಡಿಯುತ್ತಿರುವ ಮಂಗಳೂರಿನ ಬಾಲ್ಕೋ ಸ್ಟುಡಿಯೋದ ಶಾಂತರಾಮ ರಾವ್ ಅವರನ್ನು ಸನ್ಮಾನಿಸಲಾಗುತ್ತಿದೆ.

ಎರಡು ದಿನಗಳ ಕಾಲ ನಡೆಯುವ ಪ್ರದರ್ಶನಕ್ಕೆ ಸುಮಾರು 80 ಮಂದಿ ಪ್ರವೇಶ ಸಲ್ಲಿಸಿದ್ದಾರೆ. ಇದೊಂದು ಒಳ್ಳೆಯ ಪ್ರತಿಕ್ರಿಯೆ. ಇನ್ನು ಮುಂದೆಯೂ ಇಂಥದ್ದೇ ವಿಶಿಷ್ಟ ಕಾರ್ಯಕ್ರಮಗಳನ್ನು ಸಂಘವು ಹಮ್ಮಿಕೊಳ್ಳಲಿದೆ. ನಿಮ್ಮೆಲ್ಲರ ಸಹಕಾರವಿರಲಿ.